ಬಾರೆಯಾ ಬೆಳಕೆ ? ಇರುಳು ಸರಿದಂತೆಜಾರುತಿದೆ ಕಣ್ಣ ಹನಿ ನೀ ತೆರಳಿದಂತೆ .
ಚಂದಿರನ ಬೆಳಕೀಗ ಮೈಯ ಚುಚ್ಚುವುದೇಕೆ ?
ನೆನೆಪುಗಳ ನೈದಿಲೆಯು ಬಾಡುವುದೇಕೆ ?
ನೀನಿಲ್ಲದಿರುವ ಮನ ಮಂದಿರದ ತುಂಬೆಲ್ಲಾ
ಇಬ್ಬರನು ಅಗಲಿಸಿದ ವಿಧಿಯ ರಣ ಕೇಕೆ
ಉಸುಕಿನಾರ್ಣವದಲ್ಲಿ ಒಂಟಿ ಪಯಣಿಗ ಇನ್ನು
ಒರತೆ ಹುಡುಕುತ ಮರೆತೆ ನನ್ನನೇ ನಾನು
ಮತ್ತೆ ಬರಬೇಕ್ಕೆನ್ನೀ ಜೀವನದಿ ಮುಂಜಾವು
ಕಾದಿರುವೆ ಅದಕೆ..... ತುಂಬಿದೆ ನೋವು ...
waah waah !!! chennagidhe :)
ಪ್ರತ್ಯುತ್ತರಅಳಿಸಿ