ಭಾನುವಾರ, ಫೆಬ್ರವರಿ 6, 2011

ಕಾಣದ ಚೆಲುವೆ


ನನ್ನ ಮನದ ಅಂಗಳದಿ ನಲಿವ ಚೆಲುವೆ ನಿನ್ನ ನೋಡಲೆಂಥ ಸೊಗಸು
ನಿನ್ನ  ಕಾಡಿ ಬೇಡಿದರೂ ಮೊಗವ ತೋರುತಿಲ್ಲ , ಏಕೆ ಇಂಥ ಮುನಿಸು ??

                    ಗಾಡಿ - ಗೋಡೆಗಳ ಬೀಡಿನ ಮಧ್ಯದಿ ಮೊದಲು ಕಂಡೆ ನಿನ್ನ 
                   ಶೋಕಿ  ತರಲೆಗಳೇ , ಬೊಗಸೆ ಕಣ್ಣ ತುಂಬ ನೋಡಲೆಂಥ ಚೆನ್ನ 
                    ಆ ಕಣ್ಣು ಕಂಡರೂ ಮೊಗವು ಕಾಣಲಿಲ್ಲ, ಕಾಯುತಿದ್ದೆ ನಾನು 
                    ಬೈಗು ಕವಿಯುತ್ತಿತ್ತು ಸಖಿಯರೊಡನೆಯೇ, ಹೊರಟು ಹೋದೆ ನೀನು 

ಸುಗ್ಗಿ ಹಬ್ಬದಂದು ಶಿವನ ಗುಡಿಯಲಿ ,ಕೈಯ  ಬಳೆಯ ಸದ್ದು 
ಧ್ವನಿಯ ಅರಸುತ ಹೋದಾಗ ಕಂಡೆ ನೀನಲ್ಲಿ ನಿಂತದ್ದು 
ಇದೇ ಸುದಿನವೆಂದು ದೇವರ ನಮಿಸಲು ಮುಚ್ಚಿ ನಿಂತೇ ಕಣ್ಣ 
ತೆರೆದು ನೋಡಿದರೆ ನೀನಿರುವಲ್ಲಿ ನಿಂತಿದ್ದ ನಿನ್ನ ಅಣ್ಣ .

ಶನಿವಾರ, ಫೆಬ್ರವರಿ 5, 2011

ನೆನಪು ...

ಬಾರೆಯಾ ಬೆಳಕೆ ? ಇರುಳು ಸರಿದಂತೆ
ಜಾರುತಿದೆ ಕಣ್ಣ ಹನಿ ನೀ ತೆರಳಿದಂತೆ .
               
                 ಚಂದಿರನ ಬೆಳಕೀಗ ಮೈಯ ಚುಚ್ಚುವುದೇಕೆ ?
                 ನೆನೆಪುಗಳ ನೈದಿಲೆಯು ಬಾಡುವುದೇಕೆ ?
                ನೀನಿಲ್ಲದಿರುವ ಮನ ಮಂದಿರದ ತುಂಬೆಲ್ಲಾ 
                ಇಬ್ಬರನು ಅಗಲಿಸಿದ ವಿಧಿಯ ರಣ ಕೇಕೆ 

ಉಸುಕಿನಾರ್ಣವದಲ್ಲಿ ಒಂಟಿ ಪಯಣಿಗ ಇನ್ನು 
ಒರತೆ ಹುಡುಕುತ ಮರೆತೆ ನನ್ನನೇ ನಾನು 
ಮತ್ತೆ ಬರಬೇಕ್ಕೆನ್ನೀ ಜೀವನದಿ ಮುಂಜಾವು 
ಕಾದಿರುವೆ ಅದಕೆ..... ತುಂಬಿದೆ ನೋವು ...

ನಮಸ್ಕಾರ

ನೆಲುಮೆಯ ಸಹ ಬ್ಲಾಗರ್ ಗಳೇ   ನಿಮಗಿದೋ  ನನ್ನ ನಮಸ್ಕಾರ..
ಈ ತಾಣ ನನ್ನಲ್ಲಿಯೇ ಉಳಿದು ಹೋದ ಮಾತುಗಳನ್ನು ಹಂಚಿಕೊಳ್ಳಲು ಕಟ್ಟಿರುವ ಒಂದು ಪುಟ್ಟ ಗೂಡು ..
ನೀವೆಲ್ಲರೂ ಇಲ್ಲಿ ಬಂದು ನೋಡಿ ತಿದ್ದಿ ತೀಡಿ ಹೋದರೆ ಚೆನ್ನ .......
ನಾನು ಬರಿಯೋ ಪ್ರಯತ್ನ ಮಾಡ್ತೀನಿ  ನೀವು ನನ್ನ ನಡೆಸುತ್ತೀರಾ ತಾನೇ..... ಬರ್ತೀನಿ... 
    ನಿಮ್ಮವ